ಬಾಗ್‍ನಾಥ್ ದೇವಾಲಯವು (ಹಿಂದಿ:बागनाथ मंदिर) ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದ್ದು, ಬಾಗೇಶ್ವರ್ ನಗರದಲ್ಲಿ ಸರಯು ಮತ್ತು ಗೋಮತಿ ನದಿಗಳ ಸಂಗಮದಲ್ಲಿದೆ. ಬಾಗ್‍ನಾಥ್ ದೇವಾಲಯವು ಎಲ್ಲಾ ಗಾತ್ರದ ಗಂಟೆಗಳಿಂದ ಕೂಡಿದೆ ಮತ್ತು ಆಕರ್ಷಕ ಕೆತ್ತನೆಗಳನ್ನು ಹೊಂದಿದೆ. ಇದು ಬಾಗೇಶ್ವರ ಜಿಲ್ಲೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಶಿವರಾತ್ರಿಯ ಸಂದರ್ಭದಲ್ಲಿ ಇದು ಭಕ್ತರಿಂದ ತುಂಬಿರುತ್ತದೆ. ಬಾಗೇಶ್ವರ ನಗರಕ್ಕೆ ಈ ದೇವಾಲಯದಿಂದ ಹೆಸರು ಬಂದಿದೆ. 7 ನೇ ಶತಮಾನದಿಂದ ಬಾಗ್‍ನಾಥ್ ದೇವಾಲಯವು ಅಸ್ತಿತ್ವವದಲ್ಲಿದೆ ಎಂದು ಕೆಲವು ಮೂಲಗಳು ಹೇಳಿದರೂ, ನಾಗರ ಶೈಲಿಯಲ್ಲಿರುವ ಈಗಿನ ಕಟ್ಟಡವನ್ನು 1450 ರಲ್ಲಿ ಚಂದ್ ಅರಸ ಲಕ್ಷ್ಮಿ ಚಂದ್ ನಿರ್ಮಿಸಿದನು. ದೇವಾಲಯದಲ್ಲಿನ ವಿವಿಧ ಪ್ರತಿಮೆಗಳು ಕ್ರಿ.ಶ 7 ನೇ ಶತಮಾನದಿಂದ ಕ್ರಿ.ಶ. 16 ನೇ ಶತಮಾನದವರೆಗಿನ ಕಾಲಮಾನದ್ದೆಂದು ನಿರ್ಧಾರವಾಗಿದೆ. == ಛಾಯಾಂಕಣ == == ಉಲ್ಲೇಖಗಳು ==